ಏಣಗಿ ಬಾಳಪ್ಪ: 1916-. ರಂಗಭೂಮಿಯ ಪ್ರಸಿದ್ಧ ನಟರು. ಸವದತ್ತಿ ತಾಲ್ಲೂಕಿನ ಏಣಗಿಯಲ್ಲಿ ಬಡಕುಟುಂಬ ಒಂದರಲ್ಲಿ ಜನಿಸಿದ ಇವರು ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡು ತಾಯಿಯ ಪೋಷಣೆಯಲ್ಲಿ ಬೆಳೆದರು. ಇವರಿಗೆ ಬಂದೊದಗಿದ ಕಷ್ಟದಿಂದ ಶಾಲಾಶಿಕ್ಷಣ ಪ್ರಾಥಮಿಕ ಮೂರನೆಯ ತರಗತಿಯವರೆಗೆ  ಮಾತ್ರ ದೊರಕಿತು. ಚಿಕ್ಕಂದಿನಿಂದಲೂ ಇವರಿಗೆ ಬಂiÀÄಲಾಟ, ಸಂಗೀತ ಎಂದರೆ ಬಹಳ ಆಸಕ್ತಿ. ಐದಾರು ವರ್ಷದ ಹುಡುಗನಾಗಿದ್ದಾಗ ಬಯಲಾಟಗಳಲ್ಲಿ ಚಿಕ್ಕಪಾತ್ರಗಳನ್ನುಅಬಿsನಯಿಸಿ ಜನರ ಪ್ರಶಂಸೆ ಪಡೆದರು. 

ಹನ್ನೊಂದು ವರ್ಷದ ಹುಡುಗನಾಗಿದ್ದಾಗ  ಗರೂಡ ಸದಾಶಿವರಾಯರ ಪಾದುಕಾಪಟ್ಟಾಬಿsಷೇಕ ನಾಟಕದಲ್ಲಿ ಭರತನ  ಪಾತ್ರವಹಿಸುವ ಅವಕಾಶ ಒದಗಿಬಂತು. ಆ ನಾಟಕದಲ್ಲಿ ಇವರ ಪಾತ್ರ ಯಶಸ್ವಿಯಾಯಿತು. 

ಇವರು ತಮ್ಮ ಮುಂದಿನ ಜೀವನದಲ್ಲಿ ಸಾಕಷ್ಟು ಬಡತನ ಎಡರು ತೊಡರುಗಳನ್ನು ಅನುಭವಿಸಿದರು. ಆ ಸಮಯದಲ್ಲಿ ಕವಿ ಹಾಗೂ ನಾಟಕಕಾರರಾದ ಶಿವಲಿಂಗಸ್ವಾಮಿಗಳು ಇವರ ಹಿತಚಿಂತಕರೂ ಮಾರ್ಗದರ್ಶಿಯೂ ಆಗಿದ್ದರು. ಅಬ್ಬಿಗೇರಿ ಬಂಧುಗಳಿಂದ ಆರಂಭವಾದ ಅಬ್ಬಿಗೇರಿ ನಾಟಕ ಸಂಘವನ್ನು ಇವರು 1926ರಲ್ಲಿ ಪ್ರವೇಶಿಸಿದರು. ಇದರೊಂದಿಗೆ ಇವರ ಕಲಾಜೀವನ ಆರಂಭವಾಯಿತು. ಆಗ ಇವರು ಅಬಿsನಯಿಸಿದ ಕಿತ್ತೂರ ಚೆನ್ನಮ್ಮ ನಾಟಕ ಕರ್ನಾಟಕದಲ್ಲಿ ರಾಷ್ಟ್ರೀಯ ಇತಿಹಾಸವನ್ನು ನಿರ್ಮಿಸಿತು. ಅನಂತರ 1928ರಲ್ಲಿ ಮೈಲಾರೀ  ಪ್ರಾಸಾದಿತ ಸಂಗೀತ ನಾಟಕ ಮಂಡಳಿಯನ್ನು ಪ್ರವೇಶಿಸಿದರು. 1932ರಲ್ಲಿ ಹುಚ್ಚಪ್ಪ ಸೂಡಿ ಎಂಬ ಸ್ನೇಹಿತರ ಸಹಕಾರದೊಂದಿಗೆ ಗುರುಸೇವಾ ಸಂಗೀತ ನಾಟಕ ಮಂಡಳಿಯನ್ನು ಕಟ್ಟಿದರು. 

ಇವರು ಮುಖ್ಯವಾಗಿ ಸ್ತ್ರೀಪಾತ್ರಗಳನ್ನು ಹಾಕಿ ವಿವಿಧ ಕಂಪೆನಿಗಳಲ್ಲಿ ಆ ಮೂಲಕ ತಮ್ಮ ರಂಗ ಸೇವೆಯನ್ನು ಸಲ್ಲಿಸಿದ್ದಾರೆ. ಮಾರಿಕಾಂಬಾ ಪ್ರಾಸಾದಿಕ ನಾಟಕ ಮಂಡಳಿಯಲ್ಲಿ ಹೇಮರೆಡ್ಡಿ ಮಲ್ಲಮ್ಮ ಮತ್ತು ಕಿತ್ತೂರು ರುದ್ರಮ್ಮ ಈ ಎರಡೂ ನಾಟಕಗಳಲ್ಲಿ ಇವರು ವಹಿಸುತ್ತಿದ್ದ ನಾಯಕಿಯ ಪಾತ್ರಗಳು ತುಂಬ ಜನಪ್ರಿಯವಾದವು. ಮುಂದೆ ಇವರು ಪುರುಷ ಪಾತ್ರಗಳನ್ನು ಹಾಕಿ ಪ್ರಖ್ಯಾತಿ ಪಡೆದರು.  

ಕೆಲವು ಕಾಲಾನಂತರ ಇವರು ಕಲಾವೈಭವ ನಾಟಕ ಮಂಡಳಿ ಎಂಬ ಸ್ವಂತ ಕಂಪೆನಿಯನ್ನು ಪ್ರಾರಂಬಿsಸಿದರು. ಈ ಮಂಡಳಿಯ ನೇತಾರರಾಗಿ ಅವಿಶ್ರಾಂತವಾಗಿ ರಂಗಭೂಮಿಯ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಕರುಣ ವೀರ ಹಾಸ್ಯರಸಗಳನ್ನು ಅಬಿsವ್ಯಕ್ತಪಡಿಸುವಲ್ಲಿ ಶ್ರೀಯುತರು ತೋರುವ ಅಬಿsನಯ, ಕಲೆಗಾರಿಕೆ ಮೆಚ್ಚುವಂಥದ್ದು. ಕರ್ನಾಟಕದ ರಂಗಭೂಮಿಯಲ್ಲಿ ಹವ್ಯಾಸಿ ಹಾಗೂ ವೃತ್ತಿರಂಗಗಳಿಗಿರುವ ಅಂತರವನ್ನು ತೊಡೆದುಹಾಕಬೇಕೆಂಬುದು ಇವರ ಮುಖ್ಯೋದ್ದೇಶ ವಾಗಿದೆ. ಇವರ ಮಾವ ಬಂದನಪೋ ಮಾವ ಎಂಬ ಸಾಮಾಜಿಕ ವಿಡಂಬನೆ ಈ ನಿಟ್ಟಿನಲ್ಲಿ ಒಂದು ಹೊಸ ಪ್ರಯೋಗ. ಇವರು ಬೆಳ್ಳಿತೆರೆಯಲ್ಲೂ ಅಬಿsನಯಿಸಿದ್ದಾರೆ. ಇವರ ಅಬಿsನಯ ಚಾತುರ್ಯವನ್ನು  ಮೆಚ್ಚಿ ಕರ್ನಾಟಕ ಸರ್ಕಾರ ಪ್ರತಿಷಿವಿತ ಗುಬ್ಬಿ ವೀರಣ್ಣ ಪ್ರಶಸ್ತಿ ನೀಡಿ ಗೌರವಿಸಿದೆ (1994). ನಾಟ್ಯ ಭೂಷಣ ಅಬಿsನಂದನಾ ಎಂಬ ಗ್ರಂಥವನ್ನು ಇವರಿಗೆ ಸಮರ್ಪಿಸಲಾಗಿದೆ (1998). 

ಪ್ರಸಿದ್ಧ ನಟ ಏಣಗಿ ನಟರಾಜ್ ಇವರ ಮಗ. 	 				 (ಎನ್.ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ